ಹೂವು ಇರುವ ಕಡೆ ದುಂಬಿ ಇರುತ್ತೆ ಆದರೆ ದುಂಬಿ ಇದ್ದ ಕಡೆ ಹೂವು ಇರಬೇಕು ಅಂತೇನು ಇಲ್ಲ
ನೀರು ಇರುವ ಕಡೆ ಮೀನು ಇರುತ್ತೆ ಆದರೆ ಮೀನು ಇದ್ದ ಕಡೆ ನೀರು ಇರಬೇಕು ಅಂತೇನು ಇಲ್ಲ
ಮಾವಿನ ಮರ ಇರುವ ಕಡೆ ಕೋಗಿಲೆ ಇರುತ್ತೆ ಆದರೆ ಕೋಗಿಲೆ ಇದ್ದ ಕಡೆ ಮಾವಿನ ಮರ ಇರಬೇಕು ಅಂತೇನು ಇಲ್ಲ
ಹಸಿರು ಇರುವ ಕಡೆ ಪ್ರಾಣಿಗಳು ಇರುತ್ತೆ ಆದರೆ ಪ್ರಾಣಿಗಳು ಇರುವ ಕಡೆ ಹಸಿರು ಇರಬೇಕು ಅಂತೇನು ಇಲ್ಲ
ತಗ್ಗು ಇರುವ ಕಡೆ ನೀರು ಹರಿಯುತ್ತೆ ಆದರೆ ನೀರು ಹರಿಯುವ ಕಡೆ ತಗ್ಗು ಇರಬೇಕು ಅಂತೇನು ಇಲ್ಲ
ಕಾಡು ಇರುವ ಕಡೆ ಹಸಿರು ಇರುತ್ತೆ ಆದರೆ ಹಸಿರು ಇರುವ ಕಡೆ ಕಾಡು ಇರಬೇಕು ಅಂತೇನು ಇಲ್ಲ
ಗಂಡು ಹೆಣ್ಣು ಇರುವ ಕಡೆ ಸ್ನೇಹ ಇರುತೆ ಆದರೆ ಪ್ರೀತಿ ಇರಬೇಕು ಅಂತೇನು ಇಲ್ಲ
--------------------ಹನಿಹಿಲ್ ರಘು -------------------------------------------------
No comments:
Post a Comment